ABOUT OTLA GARODI, SHISHILA

!! ಓಂ ಶ್ರೀ ಶಿಶಿಲೇಶ್ವರಾಯ ನಮಃ !!
ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮ ಬೈದರ್ಕಳ ಗರಡಿ ಹಾಗೂ ಸಮಸ್ತ ದೈವಗಳ ಕ್ಷೇತ್ರ
ಶಿಶಿಲ ಬೆಳ್ತಂಗಡಿ ತಾಲೂಕು - 574 198, ದ. ಕ.

"ಕುಲಬಾರಿ ಈಶ್ವರೆ ದೆಸಿಲ್ದೇವೆರ್‍ ತಲಬಾರಿ ದೈವೊಲು ಭೂಮಿ ಉಂಡಾನಗ ಉಂಡಾಯಿ ಉಳ್ಲಾಕ್ಲು ಉದಿಪಾನ ದೈವೊಂಕ್ಲು ಒಟ್ಲದ ಸತ್ಯೊಲು" ಎಂಬ ಸತ್ಯ ವಾಕ್ಯದೊಂದಿಗೆ ಸೀಮೆಯ ಅಧಿಪತಿ ಶ್ರೀ ಶಿಶಿಲೇಶ್ವರ (ದೆಸಿಲ್ದೇವೆರ್‍) ನಿಗೆ ಗಮನಾಗಮನ ಸಂಬಂಧ ಹೊಂದಿರುವ ಕಾರನಕದ ಕ್ಷೇತ್ರವೇ ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದರ್ಕಳ ಗರೋಡಿ ಹಾಗೂ ಸಮಸ್ತ ದೈವಗಳ ಕ್ಷೇತ್ರ, ಅನಾದಿಕಾಲದಿಂದಲೂ ರಾಜವೈಭವದಿಂದ ಮೆರೆದ ಈ ಕ್ಷೇತ್ರ ಊರಿನ ಕೇಂದ್ರ ಬಿಂದುವಾಗಿದ್ದು ಇಲ್ಲಿ ಪಟ್ಟದ ಕತ್ತಿ ಇದ್ದು ಊರಿನ ನ್ಯಾಯ ತೀರ್ಮಾನ ಮಾಡುತ್ತಿದ್ದ ಬಲ್ಲಾಕುಲ ಮಂಟಪ, ಧರ್ಮಛಾವಡಿ ಹಾಗೂ ಸಾದಕ ವಿಧ್ಯೆ ಕಲಿಸುವ ಗರೋಡಿ ಶಾಲೆ ಇದ್ದು ಇಲ್ಲಿಯೇ ಬ್ರಹ್ಮ ಬೈದರ್ಕಳಾದ ಕೋಟಿ - ಚೆನ್ನಯರು ಪ್ರಾಥಮಿಕ ವ್ಯಾಸಂಗ ಮಾಡಿರುವ ಇತಿಹಾಸ ಇರುತ್ತದೆ.
ಅನಾದಿ ಕಾಲದಿಂದಲೂ ಅನುವಂಶೀಯ ಆಡಳಿತದಾರರು ದೈವಗಳ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದು ಜತೆಗೆ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯಗಳನ್ನು ಮಾಡಬೇಕೆಂಬ ಪ್ರಯತ್ನವನ್ನು ಊರವರ ಸಹಕಾರದಿಂದ ಮುನ್ನಡೆಸಿರುತ್ತೇವೆ. ಈ ಎಲ್ಲದರ ಪರಿಣಾಮವಾಗಿ ಚೇಕೋಡು ಸುಬ್ರಹ್ಮಣ್ಯ ಭಟ್ ಇವರಿಂದ ಅಷ್ಟಮಂಗಳ ಪ್ರಶ್ನೆ ಇರಿಸಿ ಮಾನ್ಯ ಕೆಮ್ಮಿಂಜೆ ನಾಗೇಶ ತಂತ್ರಿಯವರಲ್ಲಿ ದೈವಗಳ ಗುಡಿಗೆ ಶಂಕುಸ್ಥಾಪನೆ ಮಾಡಿಸಿರುತ್ತೇವೆ. ವಾಸ್ತುತಜ್ಞ ಮುನಿಯಂಗಳ ಕೃಷ್ಣಪ್ರಸಾದರ ಮಾರ್ಗದರ್ಶನದಂತೆ ಶ್ರೀ ಧರ್ಮರಸು ಉಳ್ಳಾಕ್ಲು ಗುಡಿ, ರಕ್ತೇಶ್ವರಿಯ ಧರ್ಮಛಾವಡಿ. ತರವಾಡು ಮನೆ, ಕೊಡಮಣಿತ್ತಾಯ ಗುಡಿ, ಬಲ್ಲಾಕುಲು ಮಂಟಪ, ಗುಳಿಗನ ಕಟ್ಟೆ, ಜುಮ್ರಾಲಿ ಕಟ್ಟೆ, ಹುಲಿಚಾಮುಂಡಿ ಗುಡಿ, ಶಿರಾಡಿ ರಾಜನ್ ದೈವಗಳ ಗುಡಿಗಳ ಜತೆಗೆ ತುಳುನಾಡಿನ ತೇಜಸ್ಸಿನ ಕುಡಿಗಳಾದ ತೇಜಸ್ಸಿನ ಕುಡಿಗಳಾದ ಕೋಟಿ - ಚೆನ್ನಯರು ಪ್ರಾಥಮಿಕ ವಿದ್ಯಾಭ್ಯಾಸ ಕಲಿತ ಸವಿನೆನಪಿಗಾಗಿ ಬ್ರಹ್ಮ ಬೈದರ್ಕಳ ಗರೋಡಿ, ಬ್ರಹ್ಮರ ಗುಡಿ ಹಾಗೂ ನಾಗಬ್ರಹ್ಮ ಸಾನಿಧ್ಯದ
ಜೀರ್ಣೋದ್ಧಾರದ ಕಾರ್ಯಗಳು ನಡೆಯುತ್ತಿವೆ. ಊರ ಪರಿಸರದ ಆಸ್ತಿಕರ ಸಹಕಾರ, ಶ್ರಮದಾನದಿಂದ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು ಇನ್ನೂ ಉಳಿದಿರುವ ಕೆಲಸ ಕಾರ್ಯಗಳಿಗಾಗಿ ಸುಮಾರು 50ಲಕ್ಷ ರೂಪಾಯಿ ತಗಲಬಹುದು ಎಂದು ಅಂದಾಜಿಸಲಾಗಿದೆ.
ಹಿಂದೊಮ್ಮೆ ವೈಭವದಿಂದ ಮೆರೆದು ಸೀಮೆಗೆ ಅಭಯವನ್ನಿತ್ತ ಈ ದೈವ ಸನ್ನಿದಿಯನ್ನು ಜೀರ್ಣೋದ್ಧಾರ ಮಾಡುವ ನಮ್ಮ ಪ್ರಯತ್ನಕ್ಕೆ ಭಕ್ತಾಭಿಮಾನಿಗಳಾದ ತಾವೆಲ್ಲರೂ ತನು - ಮನ - ಧನ ಗಳಿಂದ ಸಹಾಯವನ್ನಿತ್ತು ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ.
ವಿಜಯಾ ಬ್ಯಾಂಕ್, ಶಿಶಿಲ

A/c No. 130701011000945
IFSC Code : 0001307

Website : www.otlagarodi.com
 
ABOUT OTLA GARODI, SHISHILA

Comments